ಬೆಂಗಳೂರು: ಸ್ನೇಹಿತನ ಹತ್ಯೆ ಮಾಡಿ, ರುಂಡ-ಮುಂಡ ಕತ್ತರಿಸಿ ಚರಂಡಿಗೆ ಎಸೆದ ಆರೋಪಿ ಬಂಧನ! ಹಣಕಾಸು ವಿಚಾರಕ್ಕೆ ಮನಸ್ತಾಪ ಹಿನ್ನೆಲೆಯಲ್ಲಿ ಚಿಟ್ ಫಂಟ್ ಸಂಸ್ಥೆಯ ಪರಿಚಿತ ಉದ್ಯೋಗಿಯನ್ನು ತಮ್ಮ ಮನೆಗೆ ಕರೆಸಿಕೊಂಡ್ ರಾಡ್ ನಿಂದ ಹೊಡೆದು ಕೊಂಡು ಬಳಿಕ ರುಂಡ-ಮುಂಡ ಕತ್ತರಿಸಿ ರಾಜಕಾಲುವೆಗೆ ಎಸೆದಿದ್ದ ಟ್ರಾವೆಲ್ಸ್ ಏಜೆನ್ಸಿ ಮಾಲೀಕನನ್ನು ರಾಮೂರ್ತಿನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಹಣಕಾಸು ವಿಚಾರಕ್ಕೆ ಮನಸ್ತಾಪ ಹಿನ್ನೆಲೆಯಲ್ಲಿ ಚಿಟ್ ಫಂಟ್ ಸಂಸ್ಥೆಯ ಪರಿಚಿತ ಉದ್ಯೋಗಿಯನ್ನು ತಮ್ಮ ಮನೆಗೆ ಕರೆಸಿಕೊಂಡ್ ರಾಡ್ ನಿಂದ ಹೊಡೆದು ಕೊಂಡು ಬಳಿಕ ರುಂಡ-ಮುಂಡ ಕತ್ತರಿಸಿ ರಾಜಕಾಲುವೆಗೆ ಎಸೆದಿದ್ದ ಟ್ರಾವೆಲ್ಸ್ ಏಜೆನ್ಸಿ ಮಾಲೀಕನನ್ನು ರಾಮೂರ್ತಿನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಕಲ್ಯಾಣನಗರದ ನಿವಾಸಿ ಶ್ರೀನಾಥ್ (34) ಹತ್ಯೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ವಿಜಿನಾಪುರದ ವಿವಾಸಿ ಮಾಧವರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಬಸವೇಶ್ವರನಗರದ ಚಿಟ್ ಫಂಡ್ ಸಂಸ್ಥೆಯ ಉದ್ಯೋಗಿ ಶ್ರೀನಾಥ್ (34) ಮೇ 28 ರಂದು ಕಚೇರಿಗೆ ಹೋದವರು ಮನೆಗೆ ಹಿಂತಿರುಗಿರಲಿಲ್ಲ. ಮರುದಿನ ಆತನ ಪತ್ನಿ ಸಂಪಿಗೆಹಳ್ಳಿ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು.ಸಿಸಿಟಿವಿಯಲ್ಲಿ ಹತ್ಯೆಯಾದ ಶ್ರೀನಾಥ್ ಅವರ ಚಲನವಲನವನ್ನು ಪತ್ತೆಹಚ್ಚಿದ ಪೊಲೀಸರು, ರಾಮಮೂರ್ತಿನಗರದಲ್ಲಿರುವ ಆರೋಪಿಯ ಮನೆಗೆ ಹೋಗುವುದನ್ನು ನೋಡಿದ್ದಾರೆ. ಆದರೆ, ಆತ ಮನೆಯಿಂದ ಹೊರಗೆ ಬರುವ ದೃಶ್ಯಾವಳಿ ಕಂಡು ಬಂದಿಲ್ಲ. ಇದರಿಂದ ಅನುಮಾನ ಶುರುವಾಗಿದೆ. ಇದರಂತೆ ಪೊಲೀಸರು ಆರೋಪಿ ಮನೆಗೆ ಹೋದಾಗ ರಕ್ತದ ಕಲೆಗಳು ಕೂಡ ಕಂಡು ಬಂದಿವೆ. ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.ಬಳಿಕ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಮೃತದೇಹವನ್ನು ಮಚ್ಚಿನಿಂದ ತುಂಡಾಗಿ ಕತ್ತರಿಸಿ ಸಮೀಪದ ಚರಂಡಿಗೆ ಎಸೆದಿರುವುದಾಗಿ ಹೇಳಿದ್ದಾರೆ.ಹಣದ ವಿಚಾರಕ್ಕೆ ಕೊಲೆಶ್ರೀನಾಥ್ ಮತ್ತು ರಾವ್ ನಡುವಿನ ಹಣದ ವಿವಾದವೇ ಕೊಲೆಗೆ ಕಾರಣವಾಗಿದೆ ಎಂದು. ಪೊಲೀಸ್ ಮೂಲಗಳ ತಿಳಿಸಿವೆ.ಆರೋಪಿ ಶ್ರೀನಾಥ್ ಅವರ ಸಂಸ್ಥೆಯಲ್ಲಿ ಚಿಟ್ ಫಂಡ್ ಯೋಜನೆಯಲ್ಲಿ 5 ಲಕ್ಷ ರೂ ಹೂಡಿಕೆ ಮಾಡಿದ್ದ. ಈ ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ತಮ್ಮ ಹಣವನ್ನು ಹಿಂದಿರುಗಿಸುವಂತೆ ಶ್ರೀನಾಥ್‌ಗೆ ರಾವ್ ಒತ್ತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ಮೂರು ದಿನಗಳಿಂದ ಶವದಕ್ಕಾಗಿ ಶೋಧ ನಡೆಸುತ್ತಿದ್ದೇವೆ. ಭಾರೀ ಮಳೆಯಿಂದಾಗಿ ಚರಂಡಿಯಲ್ಲಿ ನೀರು ನಿಂತಿದ್ದರಿಂದ ಶವ ಪತ್ತೆ ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.